Thursday, 15 August 2013

ಕೊಲದೇವಿ - ಶ್ರೀ ಪ್ರಸ್ಸನ್ನ ಚೌಡೇಶ್ವರಿ ದೇವಾಲಯ ಇತಿಹಾಸ



ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯ ಇತಿಹಾಸ

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕು, ಅಗರ ಮಂಡಲದ, ಕೊಲದೇವಿ, ಗ್ರಾಮದಲ್ಲಿ ನೆಲಸಿರುವ, ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯವು , ಮೂಲತಃ,  ಶತಮಾನಗಳಿಂದಲೂ, ವಂಶ ಪಾರಂಪರೆಯಾಗಿ, ಪೂಜಿಸುತಿರುವ "ನಾಗರ ಹುತ್ತ".  ಕಾಲಕ್ರಮೇಣ ಸ್ತಳದಲ್ಲಿ , ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯವನ್ನು ನಿರ್ಮಾಣ ಮಾಡಲು ಪ್ರೇರಣೆ ಆಗಿರುತದೆ. ಸ್ತಳದಲ್ಲಿ ಹಾವಿನ ಹುತ್ತದಲಿ, ಉದ್ಭವ ಮೂರ್ತಿಗಳಾದ  ಶಿವ ಲಿಂಗ, ಚೌಡೇಶ್ವರಿ ಇತ್ತು ಎಂಬ ಪ್ರತೀತಿ , ಇಲ್ಲಿ   ಜೀವಂತ , ಕಂದು  ಬಣ್ಣದ, ವಯಸ್ಸಾದ  ನಾಗರ ಹಾವು ಇರುವುದಾಗಿ, ಹಾಗು ನೋಡಿದ  ಊರಿನ ಜನ ಈಗಲೂ ಹೇಳುವುದು, ಉಂಟು.
ಶ್ರೀ ಪ್ರಸನ್ನ ಚೌಡೇಶ್ವರಿ ದೇವಸ್ತಾನ  ನಿರ್ಮಾಣಕ್ಕೆ ಪ್ರಾರಂಬ ಮಾಡಿ, ದಿನ  ಬೃಹತ್  ಪ್ರಮಾಣದಲ್ಲಿ  ನಿಂತಿರುವುದು ,   ದೇವಿಯ  ಮಹಿಮೆ ಎನ್ನುವುದರಲ್ಲಿ ಸಂಶಯವಿಲ್ಲಾ.
ಶ್ರೀ ಪ್ರಸನ್ನ ಚೌಢೇಶ್ವರಿ ದೇವಾಲಯ ಬಹಳ ಮುಖ್ಯ ವಾದ ಮತು, ಭೇಟಿ ಕೊಡಲೇಬೇಕಾದ , ಇಷ್ಟಾರ್ಥ ನೆರವೇರುವ ಶಕ್ತಿ ದೇವತೆ.  ಶ್ರೀ ಪ್ರಸನ್ನ ಚೌಢೇಶ್ವರಿ  ಸಾಮಾನ್ಯ ವಾಗಿ ಕುಳಿತಿರುವ ಭಂಗಿ , ಮೂಲ ವಿಗ್ರಹ  ನಿಂತಿರುವ,ಹಾಗು ಸ್ತ್ರೀ ನಾಗರು ಗಳು ದ್ವಾರಪಾಲಕರು . ಬಹಳ ವಿಶೇಷ.  ೫೦ ಅಡಿಗಳ ಗರುಢ ಕಂಬ,  ನಿಧಾನವಾಗಿ ನೋಡಲೇ ಬೇಕಾದ ಭಕ್ತಿ ಪ್ರದಾನ ಸ್ತಳ.
ದಕ್ಷಿಣ ಭಾರತದಲ್ಲಿ ಎಲ್ಲೂ ನೋಡ ಸಿಗದಂಥಹ , ೧೦ ಅಡಿ x ಅಡಿ ಗಳ ಮಹಿಷಾಸುರ ಮರ್ದಿನೀ ಉತ್ಸವ ವಿಗ್ರಹ ಬಹಳ ಅಪರೂಪ.
ಕಳೆದ ,೩೫ ವರುಷ ಗಳಿಂದ , ದೇವಿಗೆ ನಿತ್ಯ ಪೂಜೆ, ನವರಾತ್ರಿ,ಪೂಜೆ, ಪ್ರತಿ ಪೌರ್ಣಮಿ, ಶ್ರೀ ಸತ್ಯನಾರಾಯಣ ವ್ರತ , ಸಂಕಷ್ಟಹರ ಚತುರ್ಥಿ, ರಾಹು ಕಾಲದ ಪೂಜೆ ವಿಶೇಷ ದಿನಗಳಲ್ಲಿ  ವಿಶೇಷ ಪೂಜೆಗಳು -ಅನ್ನ ಸಂತರ್ಪಣೆ ನಿರಂತರವಾಗಿ  ವೈಭವೋಕ್ತ ವಾಗಿ ನಡೆಯುತಿದೆ.,
ಶ್ರೀ ಪ್ರಸನ್ನ ಚೌಢೇಶ್ವರಿ ಗೆ ಪ್ರತಿ ಚಿತ್ರ ಪೂರ್ಣಿಮೆ ಇಂದ -ಚತುರ್ಥಿ ವರೆಗೆ  - ದೇವಿಯ ಜಾತ್ರೆ ಬಹಳ ವಿಜ್ರುಂಬಾಣೆ ಇಂದ ನಡೆಯುತದೆ,ಅಗ್ನಿ ಗುಂಡ ಉತ್ಸವ ಮತು ಮಹಿಷಾಸುರ ಮರ್ಧಿನೆ  ಮೇಲೆ ತಾಯಿಯಾ ಪಲ್ಲಕ್ಕಿ ಉತ್ಸವ ಆಗಮ ರೀತಿ ನಡಿಯುತದೆ .ಪ್ರತಿಯೊಬ್ಬರು ನೋಡಲೇ ಬೇಕಾಗಿರುವ ಉತ್ಸವ.  ಅತಿ ವಿಜ್ರುಂಬಣೆ  ಇಂದ ಸಾಂಸ್ಕೃತಿಕ  ಕಾರ್ಯ ಕ್ರಮಗಳು. ನವರಾತ್ರಿ ಸಮಯದಲ್ಲಿ ವಿಶೇಷಪೂಜೆ-ಚಂಡಿಕ ಹೋಮ -ನಡೆಯುತದೆ.
ಭಕ್ತ ಜನರು ತಮ್ಮ ಇಷ್ಟ-ಕಾರ್ಯ ಸಿದ್ದಿಗಾಗಿ - ಶ್ರೀ ಪ್ರಸನ್ನ ಚೌಡೇಶ್ವರಿ ಅಮ್ಮನವರಿಗೆ, ವಿಶೇಷವಾಗಿ- ಸಂಪಿಗೆ, ಪಾರಿಜಾತ, ಕೆಂಪು ದಾಸವಾಳ, ದೇವಗನ್ನೆರು, ಮಲ್ಲಿಗೆ , - ಸುವಾಸನ ಭರಿತ  ಹೂ ಗಳಿಂದ  ಪೂಜಿಸಿದರೆ - ತಮ್ಮ ಇಷ್ಟ  ಸಿದ್ದಿಯಗುತದೆ ಎಂಬುದು ನಂಬಿಗೆ.,
ಭಕ್ತ ಪರಂಪರೆಗೆ, ಶಕ್ತಿ ದಾಯಕ,ಮುಕ್ತಿ ದಾಯಕ  ಮಾತೆ,
ಶ್ರೀ ಪ್ರಸನ್ನ ಚೌಢೇಶ್ವರಿ   ಭಕ್ತಿ ಮಂತ್ರ-ದಂಡಕವು ಮೂಲ ತೆಲುಗಿನ ಭಾಷೆ ,ಲಿಪಿ ಕನ್ನಡ, ಜಿಲ್ಲೆ ದ್ವಿಭಾಷ ಸೂತ್ರ ಅಳವಡಿಸಿದೆ, ದಂಡಕವನ್ನು  ಮೂಲಕ್ಕೆ ಧಕ್ಕೆ ಬರದಂತೆ ಮಹನೀಯರು  ಕನ್ನಡಕ್ಕೆ ಅಳವಡಿಸಿರುತಾರೆ. ಪವಿತ್ರ ಗ್ರಂಥವಾದ ದಂಡಕವನ್ನು- ದಿನಾಲೂ ಪಟಿಸಿದರೆ ದೇವಿ ಭಾಗವತ, ಮಹಾಪುರಾಣ ಪಠಣ ಮಾಡಿದ ಪುಣ್ಯ ದೊರೆಯುತದೆ.
ಸಂಗ್ರಹ  ಜಿ ಆರ್ ಶ್ರೀಧರ್ .

No comments:

Post a Comment